ಕೃತಿಕಾ ಕಮ್ರಾ(ಜನನ ೨೫ ಅಕ್ಟೋಬರ್ ೧೯೮೮)ರವರು ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿಯಾಗಿದ್ದಾರೆ. ದೂರದರ್ಶನ ಕಾರ್ಯಕ್ರಮಗಳಾದ ಕಿತನಿ ಮೊಹಬ್ಬತ್ ಹೈನಲ್ಲಿ ಆರೋಹಿ ಪಾತ್ರ, ಕುಚ್ ತೋ ಲೋಗ್ ಕಹೆಂಗೆಯಲ್ಲಿ ಡಾ.ನಿಧಿ, ರಿಪೋರ್ಟರ್ಸ್ ನಲ್ಲಿ ಅನನ್ಯಾ ಮತ್ತು ಪ್ರೇಮ್ ಯಾ ಪಹೇಲಿ - ಚಂದ್ರಕಾಂತದಲ್ಲಿ ಚಂದ್ರಕಾಂತಾ ಪಾತ್ರಕ್ಕಾಗಿ ಕೃತಿಕಾ ಕಮ್ರಾರವರು ಹೆಸರುವಾಸಿಯಾಗಿದ್ದಾರೆ. ೨೦೧೪ ರಲ್ಲಿ ಅವರು ಝಲಕ್ ದಿಖ್ಲಾ ಜಾ ಎಂಬ ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಇವರು ೨೦೧೮ ರಲ್ಲಿ ಮಿತ್ರೋನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. == ಆರಂಭಿಕ ಜೀವನ == ಕೃತಿಕಾ ಕಮ್ರಾರವರು ೨೫ ಅಕ್ಟೋಬರ್, ೧೯೮೮ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದರು ಮತ್ತು ಮಧ್ಯಪ್ರದೇಶದ ಅಶೋಕನಗರದಲ್ಲಿ ಬೆಳೆದರು. ಅವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಸುಖಪುರದ ಆನಂದ್ ಪ್ರಾಥಮಿಕ ಶಾಲೆಯಲ್ಲಿ ಮಾಡಿದರು. ಅಲ್ಲಿ ಅವರ ತಂದೆ ದಂತವೈದ್ಯರಾಗಿದ್ದಾರೆ ಮತ್ತು ತಾಯಿ ಪೌಷ್ಟಿಕತಜ್ಞ ಮತ್ತು ಅಶೋಕನಗರದ ಶ್ರೀ ಆನಂದಪುರ ಟ್ರಸ್ಟ್ ಚಾರಿಟಬಲ್ ಆಸ್ಪತ್ರೆಯಲ್ಲಿ ಶಿಕ್ಷಣ ತಜ್ಞರಾಗಿದ್ದಾರೆ. ಅವರು ಅಶೋಕನಗರದ ತಾರಾ ಸದನ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಲ್ಪ ಸಮಯ ವ್ಯಾಸಂಗ ಮಾಡಿದರು. ನಂತರ ಉತ್ತರ ಪ್ರದೇಶದ ಕಾನ್ಪುರದ ಸೇಂಟ್ ಜೋಸೆಫ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಾಧ್ಯಮಿಕ ಶಾಲೆಯನ್ನು ಪೂರ್ಣಗೊಳಿಸಿದರು ಮತ್ತು ನವದೆಹಲಿಯ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ ಅಧ್ಯಯನವನ್ನು ಮುಂದುವರಿಸಿದರು. ನಂತರ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಫ್ಯಾಷನ್ ಅಧ್ಯಯನ ಮಾಡಿದರು ಆದರೆ "ಯಹಾನ್ ಕೆ ಹಮ್ ಸಿಕಂದರ್" ಚಿತ್ರದಲ್ಲಿ ನಟಿಸಿದ್ದರಿಂದ ಮೊದಲ ವರ್ಷದ ನಂತರ ಅದನ್ನು ತೊರೆದರು. == ಫಿಲ್ಮೋಗ್ರಫಿ == === ಚಲನಚಿತ್ರಗಳು === === ವೆಬ್ ಸರಣಿ === === ದೂರದರ್ಶನ === == ಡಿಸ್ಕೊಗ್ರಫಿ == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==